ಸೇವೆಗಳು

ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯು ಐತಿಹಾಸಿಕ ಮಹತ್ವವುಳ್ಳ ದಾಖಲೆಗಳ ಭಂಡಾರವೇ ಆಗಿದೆ. ಇತಿಹಾಸಕ್ಕೆ ಮೂಲಾಧಾರವಾದ ದಾಖಲೆಗಳು ಇಲ್ಲಿವೆ. ಮೈಸೂರಿನ ಇತಿಹಾಸ, ಮೈಸೂರಿನಲ್ಲಿ ಬ್ರಿಟಿಷ್ ಆಡಳಿತ ಸ್ಥಾಪನೆ, ಹೈದರಾಲಿ, ಟಿಪ್ಪುಸುಲ್ತಾನರು, ಫ್ರಾನ್ಸ್ ದೇಶದೊಡನೆ ಸಂಪರ್ಕ ನಡೆಸಿದ ಬಗ್ಗೆ ಪ್ರೆಂಚ್ ದಾಖಲೆಗಳು, ಮೈಸೂರು ಕಾಂಗ್ರೆಸ್ ಪಕ್ಷವು ಮೈಸೂರು ಸಂಸ್ಥಾನದಿಂದ ಬ್ರಿಟಿಷರನ್ನು ಹೊರದೂಡಲು ಪ್ರಯತ್ನಿಸಿದ ಕಾರ್ಯ ಮತ್ತು ಏಕೀಕರಣ ಚಳುವಳಿ ಇತ್ಯಾದಿ ದಾಖಲೆಗಳು ಇಲ್ಲಿವೆ. ಇದರ ಜೊತೆಗೆ ಕನ್ನಡ, ಮರಾಠಿ, ಮೋಡಿ ದಾಖಲೆಗಳು, ಗೆಜೆಟ್‍ಗಳು (1866) ದೊರಕುತ್ತವೆ. ಸಾಕಷ್ಟು ದಾಖಲೆಗಳು ಇಂಗ್ಲೀಷ್ ಭಾಷೆಯಲ್ಲಿವೆ. ಜನಸಾಮಾನ್ಯರು, ಸಂಶೋಧಕರು, ಪಂಡಿತರು, ಅಧಿಕಾರಿಗಳು, ಸರ್ಕಾರಿ ಸಿಬ್ಬಂದಿ ವರ್ಗದವರು, ಅರೆ ಸರ್ಕಾರಿ ಸಂಸ್ಥೆಗಳು ಈ ದಾಖಲೆಗಳ ಉಪಯೋಗವನ್ನು ಪಡೆಯುತ್ತಿದ್ದಾರೆ.

                                              ವಿವಿಧ ಇಲಾಖೆಗಳ ದಾಖಲೆಗಳ ಶ್ರೇಣಿಗಳು ಕೆಳಕಂಡಂತಿವೆ:

ಸಾಮಾನ್ಯ (ಮಿಸಲೇನಿಯಸ್) (1836-1942)

ಸುಂಕ (1918-1926)

ಅರಣ್ಯ (1836-1943)

ಅರಮನೆಯ ಪತ್ರಗಳು(1867-1923)

ಧಾರ್ಮಿಕ ದತ್ತಿ (1846-1943)

ಗಣಿಗಾರಿಕೆ (1915-1942)

ಕೊಡಗು ಪ್ರಾಂತ್ಯ (1952-1955)

ವೈದ್ಯಕೀಯ (1831-1942)

ಬ್ಯಾಕಿಂಗ್ (1871-1902)

ದಿವಾನರ ವ್ಯವಹಾರ ಪತ್ರಗಳು (1899-1906)

ಮುನಿಸಿಪಲ್ (1811-1945)

ಭೂ ಸರ್ವೇಕ್ಷಣೆ (1860-1947)

ಆರ್ಥಿಕ ಸಮ್ಮೇಳನಗಳು (1917-1922)

ವಿದ್ಯಾ ಇಲಾಖೆ (1851-1953)

ಶಾಸನ ಸಭೆ (1904-1942)

ನೈಪುಣ್ಯತೆ ಮತ್ತು ಸಾಮಾನ್ಯ ರೂಲ್ಸ್

ಕೃಷಿ (1836-1942)

ನ್ಯಾಯಾಲಯ (1835-1925)

ಕೈಗಾರಿಕೆ ಮತ್ತು ವಾಣಿಜ್ಯ (1872-1946)

ಪ್ರೆಸ್ (1862-1925)

ಸೆರೆಮನೆ (1859-1942)

ಕಂದಾಯ ಇಲಾಖೆ (1904-1924)

ಮಿಲಿಟರಿ (ಸೇನೆ) (1840-1942)

ರಸ್ತೆ ತೆರಿಗೆಗಳು (1936-1942)

ಸರ್ಕಾರಿ ತೋಟಗಾರಿಕೆ(1926-1942)

ಅಂಕಿ ಅಂಶಗಳು (1864-1926)

ಒಳಚರಂಡಿ (1862-1900)

ಸ್ಥಳೀಯ ಪರೀಕ್ಷೆಗಳು (1877-1925)

ಕಾನೂನು (1927-1942)

ಪೊಲೀಸ್ (1832-1942)

ಸ್ಥಳೀಯ ಸಂಸ್ಥೆಗಳು (1837-1943)

ಪಶುಸಂಗೋಪನೆ (1871-1902)

ಹಣಕಾಸು (1903-1942)

ಸಾಮಾನ್ಯ ಹಣಕಾಸು (1845)

ರಹಸ್ಯ ವಿಭಾಗ (1913-1943)

 ಸಂಶೋಧಕರ ಮತ್ತು ಜನಸಾಮಾನ್ಯರ ಉಪಯೋಗಕ್ಕಾಗಿ ಹಲವು ಸೇವಾ ಸೌಲಭ್ಯಗಳಿವೆ. ಪ್ರಮುಖವಾಗಿ ಮೌಖಿಕ ಇತಿಹಾಸದ ಧ್ವನಿಸುರುಳಿಗಳು, ಮೈಕ್ರೋಫಿಲಂ ರೋಲ್‍ಗಳು ಮತ್ತು ಐತಿಹಾಸಿಕ ದಾಖಲೆಗಳ ಪಟ್ಟಿ ಎಲ್ಲರ ಉಪಯೋಗಕ್ಕಾಗಿ ದಾಖಲೆಗಳ ಜೆರಾಕ್ಸ್ ಹಾಗೂ ಮೈಕ್ರೋಫಿಲಂ ಕಾಪಿಗಳನ್ನು ಇಲಾಖೆ ಒದಗಿಸುತ್ತಿದೆ. 35 ವರ್ಷ ಹಳೆಯ ದಾಖಲೆಗಳನ್ನು ಸಂಶೋಧಕರಿಗೆ, ಜನಸಾಮಾನ್ಯರಿಗೆ ತೆರೆದಿಡಲಾಗಿದೆ. ಖಾಸಗಿಯವರಿಂದ ಸಂಗ್ರಹಿಸಲ್ಪಟ್ಟ ದಾಖಲೆಗಳನ್ನು ಸಹ ಸಂಶೋಧಕರಿಗೆ ಒದಗಿಸಲಾಗುವುದು.


DISCLAIMER: Content owned, maintained and updated by Karnataka State Archives Department.

Facebook Youtube Twitter Gmail WEBSITE DESIGNED BY: KSA, Bangalore

WEBSITE HOSTED BY:
National Informatics Centre, Bangalore